ತೀರ್ಥಹಳ್ಳಿ : ಫೆ. 14 ರಂದು ಭಾರತೀಯ ಜನತಾ ಪಾರ್ಟಿ ತೀರ್ಥಹಳ್ಳಿ ವತಿಯಿಂದ ಬಿ ಎಲ್ ಎ – ಕಾರ್ಯಗಾರ ಹಾಗೂ ಮತದಾರ ಪಟ್ಟಿ ಪರಿಷ್ಕರಣೆ ತಾಲೂಕಿನ ಆರ್ ಎಸ್ ಬಿ ಸಭಾ ಭವನ ಕುರುವಳ್ಳಿಯಲ್ಲಿ ಕಾರ್ಯಕ್ರಮ ಜರುಗಿತು.ಈವೇಳೆ ಶಾಸಕರು ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಭಾಗಿಯಾಗಿದ್ದರು.ಕಾರ್ಯಕ್ರಮದ ಉದ್ಘಾಟನೆ ಸಮಯದಲ್ಲಿ ಆದ ಸಣ್ಣ ತಪ್ಪು ಬಿಜೆಪಿ ಪಕ್ಷಕ್ಕೆ ಮುಖಭಂಗ ಮಾಡಿದಂತೂ ಸತ್ಯ.

ಉದ್ಘಾಟನೆಯಲ್ಲಿ ಜ್ಯೋತಿ ಬೆಳಗಿಸುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಲಿ ಎಂಬ ಕೋರಿಕೆಯ ನಿಲುವನ್ನು ಸ್ಪಷ್ಟಪಡಿಸುವುದು ಜೊತೆಗೆ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿ (ದೀಪ)ಬೆಳಗಿಸುವುದಕ್ಕೆ ವಿಶೇಷ ಸ್ಥಾನಮಾನ ವಿದೆ. ಆದರೆ ಬಿಜೆಪಿಯವರು ಇದನ್ನ ಪಾಲಿಸದಿರುವುದು ಬೇಸರದ ಸಂಗತಿ. ಬಿಜೆಪಿ ಮುಖಂಡರೊಬ್ಬರು ಉದ್ಘಾಟನೆಯಲ್ಲಿ ಚಪ್ಪಲಿ ಧರಿಸಿ ಜ್ಯೋತಿ ಬೆಳಗಿಸುವುದು ಎಷ್ಟು ಸರಿ ಎಂಬುದು ಸಾರ್ವಜನಿಕ ಪ್ರಶ್ನೆ ಯಾಗಿದೆ. ಈ ಬಗ್ಗೆ ಶಾಸಕರ ಉತ್ತರವೇನು ಎಂಬುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *