
ತೀರ್ಥಹಳ್ಳಿಯಲ್ಲಿ ಆಯುರ್ವೇದ ಚಿಕಿತ್ಸೆ ಕೇಂದ್ರವನ್ನು ಸ್ಥಾಪಿಸಿ 49 ವರ್ಷಗಳ ದೀರ್ಘ ಅವಧಿಯಲ್ಲಿ ಲಕ್ಷಾಂತರ ರೋಗಿಗಳಿಗೆ ತನ್ನ ವೈದ್ಯಕೀಯ ಚಿಕಿತ್ಸೆ ಯ ಮೂಲಕ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಇವರ ಆಯುರ್ವೇದ ಚಿಕಿತ್ಸೆ ಪಡೆಯದಿರುವಂತಹ ವ್ಯಕ್ತಿಗಳಿಲ್ಲ ಇವರ ಸಾಧನೆಗೆ ಡಿಸೆಂಬರ್ 28ರಂದು ನಡೆದಂತಹ ವಿಶ್ವ ಆಯುರ್ವೇದ

ಸಮ್ಮೇಳನದಲ್ಲಿ ದೇಶದ 180 ವೈದ್ಯರು ಪಾಲ್ಗೊಂಡಂತಹ ಸಭೆಯಲ್ಲಿ ಇವರಿಗೆ ಆಯುರ್ವೇದ ವಿಶ್ವ ರತ್ನ ಪ್ರಶಸ್ತಿ ಲಭಿಸಿದೆ ಈ ಸಂದರ್ಭದಲ್ಲಿ ಇವರನ್ನು ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಸುಶೀಲ ಶೆಟ್ಟಿ , ಜಿಲ್ಲಾ ಹಿಂದುಳಿದ ವರ್ಗದ ಕಾರ್ಯದರ್ಶಿಯಾದಂತಹ ರಾಜೇಶ್ ಹಾಗೂ ವಿಕ್ರಂ ಶೆಟ್ಟಿ ರವಿ ಕಡ್ತುರ್ ಅಬಿದ್ಆಲಿ ಇದ್ದರು.

