ತೀರ್ಥಹಳ್ಳಿ : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಿಕ್ಸಿಂಗ್ ಡಾಂಬರ್ ಘಟಕಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನಲೆಯಲ್ಲಿ ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಅವರು ಮೇಗರವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಮಾಡಲಾಗುತ್ತಿದ್ದ

ಮಿಕ್ಸಿಂಗ್ ಡಾಂಬರ್ ಘಟಕ ವನ್ನು ಸ್ಥಗಿತಗೊಳಿಸಿದ್ದಾರೆ.ಸರ್ವೇ ನಂಬರ್ 258 ರ ಗುಡ್ಡೆಕೇರಿ ಸಮೀಪದ ಹೊಸೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಮಿಕ್ಸಿಂಗ್ ಡಾಂಬರ್ ಘಟಕವನ್ನು ಅಕ್ರಮವಾಗಿ ಮಾಡಲಾಗುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ತಹಸೀಲ್ದಾ‌ರ್ ಪರಿಶೀಲನೆ ನಡೆಸಿ ಡಾಂಬರ್ ಘಟಕ ವನ್ನು ಸ್ಥಗಿತಗೊಳಿಸಿದ್ದಾರೆ.

Leave a Reply

Your email address will not be published. Required fields are marked *