
ತೀರ್ಥಹಳ್ಳಿ: ತಾಲೂಕಿನ ಪ್ರವಾಸಿ ಮಂದಿರದಲ್ಲಿ ಅ. 25 ರಂದು ಜಯ ಕರ್ನಾಟಕ ಸಂಘಟನೆ ತೀರ್ಥಹಳ್ಳಿ ಘಟಕದ ಪ್ರಮುಖ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು.

ಪ್ರಮುಖವಾಗಿ ತಾಲೂಕಿನಲ್ಲಿ ಸಂಘಟನೆಯ ಸದಸ್ಯತ್ವ ಅಭಿಯಾನದ ವಿಚಾರ ಹಾಗೂ ಈ ವರ್ಷದಲ್ಲಿ ರಕ್ತದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುವ ವಿಚಾರವಾಗಿ ಚರ್ಚೆ ನಡೆದಿದ್ದು ಈ ವಿಷಯ ಕಾರ್ಯ ರೂಪಕ್ಕೆ ತರಲು ರೂಪುರೇಷೆ ಬಗ್ಗೆ ಚರ್ಚಿಸಲಾಗಿದ್ದು

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ತೀರ್ಥಹಳ್ಳಿಯ ಅಧ್ಯಕ್ಷ ಕುರುವಳ್ಳಿ ನಾಗರಾಜ್, ಸಂಘಟನೆಯ ಕಾರ್ಯಾಧ್ಯಕ್ಷ ತಾರನಾಥ ಶೆಟ್ಟಿ ಹಾಗೂ ಬಸ್ಟ್ಯಾಂಡ್ ಬಳಗದ ಅಧ್ಯಕ್ಷರು ನಿರಂಜನ್ ಗೌಡ ಮತ್ತು ಸಂಘಟನೆಯ ಪ್ರಮುಖರಾದ ಅಮರನಾಥ್ ಶೆಟ್ಟಿ ಮಹೇಶ್ ಗೌಡ ವಿನಯ್ ಕುಮಾರ್ ಪ್ರಶೋದ್ ಶೆಟ್ಟಿ ಪೂರ್ಣೇಶ್ ಕೊಂಡ್ಲೂರು ರಾಜೇಶ್ ಮೊಗವೀರ ವಿನಯ್ ಶೆಟ್ಟಿ ಮೇಲಿನ ಕುರುವಳ್ಳಿ ಅನುದೀಪ್ ಕುಶಾವತಿ ಕಾರ್ತಿಕ್ ಹೆಗ್ಗೆಬೈಲು ಅರ್ಜುನ್ ಮಾಳೂರು ಕುರುವಳ್ಳಿ ನಾಗೇಶ್ ಗುಂಡ ನಾಗರಾಜ್ ಕುಳ್ಳ ಅಕ್ಷಯ್ ಹೊದಲ. ನಿತಿನ್ ಪೂಜಾರಿ ಸಂಕದಹೊಳೆ ಕೌಶಿಕ್ ಸಾತ್ವಿಕ್ ಭಾಗವಹಿಸಿದ್ದರು

