ಕಟ್ಟಿಗೆ ಹೋದವರ ಮೇಲೆ ಮಾತ್ರವ ಇವರ ದರ್ಪ – ಸ್ಥಳೀಯರ ಪ್ರಶ್ನೆ

ತೀರ್ಥಹಳ್ಳಿ : ತಾಲೂಕಿನ ಹೆಗ್ಗೋಡು ಗ್ರಾಂ ಪಂ ವ್ಯಾಪ್ತಿಯ ಹೊರ ಬೈಲ್ ಬಳಿ ಕಾಡುಕೋಣವೊಂದು ಆಯತಪ್ಪಿ ಬಾವಿಗೆ ಬಿದ್ದು 3 ದಿನವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದರು. ಆದರೆ ಅದಿನ್ನು ಕೊಳೆತು ದುರ್ವಾಸನೆ ಬಂದರೆ ಗತಿ ಏನು, ಜೊತೆಗೆ ಅದರಿಂದ ಹರಡುವ ಕಾಯಿಲೆಗಳ ಬಗ್ಗೆ ಗಮನ ಹರಿಸುವುದಿಲ್ಲವೇ ಎಂಬುದು ಸ್ಥಳೀಯರ ಅಕ್ರೋಶವಾಗಿದೆ.

ರೈತರು ತಮ್ಮ ದಿನ ನಿತ್ಯದ ಉಪಯೋಗಕ್ಕೆ ಒಣ ಕಟ್ಟಿಗೆ ಕಡಿದು ತಂದರೆ ಅದನ್ನೇ ಯಾವುದೊ ದೊಡ್ಡ ತಪ್ಪು ಮಾಡಿದ ಹಾಗೆ ಅವರ ಮೇಲೆ ದರ್ಪ ತೋರಿಸುವ ಅಧಿಕಾರಿಗಳಿಗೆ ಕಾಡು ಕೋಣದ ಸಾವು ದೊಡ್ಡ ವಿಷಯವಾಗಿಲ್ಲವೇ ಎಂಬುದು ಅಲ್ಲಿನ ರೈತರ ಪ್ರಶ್ನೆಯಾಗಿದೆ.ಅದೇನೇ ಇರಲಿ ಕಾಡುಕೋಣದ ಕಳೆ ಬರವನ್ನು ಭಾವಿಯಿಂದ ಹೊರಗೆ ತೆಗೆಯುವಂತೆ ಅರಣ್ಯ ಇಲಾಖೆಗೆ ತಾಕಿತು ಮಾಡಿದ್ದಾರೆ.

Leave a Reply

Your email address will not be published. Required fields are marked *