
ತೀರ್ಥಹಳ್ಳಿ : ಪರಮಪೂಜ್ಯ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ || ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೀರ್ಥಹಳ್ಳಿ -1 ರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಚಂಗಾರು ಆಗುಂಬೆ ವಲಯ ಶೌರ್ಯ ವಿಪತ್ತು ಘಟಕ ನಾಲೂರು ಇವರ ಸಹಯೋಗದೊಂದಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ

ಕಾರ್ಯಕ್ರಮವು ದಿ. 24 ರ ಶನಿವಾರ ಶ್ರೀ ಕುಮಾರ ರಾಮ ದೇವಸ್ಥಾನ ಕಲ್ಲುಳ್ಳಿ ಯಲ್ಲಿ ನಡೆದಿದ್ದು. ಈ ಕಾರ್ಯಕ್ರಮಕ್ಕೆ ಭೀಮನ ಕಟ್ಟೆ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಘುವರೇಂದ್ರ ತೀರ್ಥರ ದಿವ್ಯ ಸಾನಿಧ್ಯ ವಹಿಸಿದ್ದು,ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜೊತೆಗೆ ಆಶೀರ್ವಾದದ ಜೊತೆಗೆ ಪ್ರವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇವೇಳೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಯನಾರಾಯಣ ಸಮಿತಿ ಶಿರೂರು ಇದರ ಅಧ್ಯಕ್ಷರಾದ ಹೂವಪ್ಪ ಗೌಡರು, ಹೊನ್ನೇತಾಳು ಗ್ರಾಮ ಪಂ ಅಧ್ಯಕ್ಷರಾದ ರವೀಶ್ ಎಸ್, ಮಾಜಿ ಅಧ್ಯಕ್ಷರಾದ ಕೋಟೆಗುಡ್ಡೆ ಸುರೇಂದ್ರ,ಸದಸ್ಯರಾದ ಶ್ರೀಮತಿ ಶಾರದ, ಒಕ್ಕೂಟದ ಅಧ್ಯಕ್ಷರಾದ ಕೃಷ್ಣಮೂರ್ತಿ ಸುಳುಗೋಡು ಶಿವಮೊಗ್ಗ ಜಿಲ್ಲಾ ಜನ ಜಾಗೃತಿ ಸದಸ್ಯರಾದ ಅರುಣ್ ಗುಡ್ಡೆಕೇರಿ, ಕ್ಷೇತ್ರ ಯೋಜನಾಧಿಕಾರಿಗಳಾದ ಮಮತ ಶೆಟ್ಟಿ,ಮೇಲ್ವಿಚಾರಕರಾದ ಶ್ರೀನಿವಾಸ್,ಧರ್ಮಸ್ಥಳ ಸಂಘಗಳ ಪದಾಧಿಕಾರಿಗಳು ಸಂಘದ ಸದಸ್ಯರು, ಸಾರ್ವಜನಿಕರು ಊರಿನ ಪ್ರಮುಖರು ಇದ್ದರು.
