

ತೀರ್ಥಹಳ್ಳಿ :ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಈಡಿಗ ಸಂಘದ ಮಾಜಿ ಅಧ್ಯಕ್ಷರು,ಹಾಲಿ ಸದಸ್ಯರಾದ ಮುಂಡಿಗೆಮನೆ ಡಿ ಲಕ್ಷ್ಮಣ್ ವಯೋಸಹಜ ಖಾಯಿಲೆಯಿಂದ ಅ.04 ರಂದು ವಿಧಿವಶರಾಗಿದ್ದಾರೆ.

ಮೃತರ ಪಾರ್ಥವ ಶರೀರ ತೀರ್ಥಹಳ್ಳಿ ಸೀಬಿನ ಕೆರೆ ಯ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ, ಅವರ ಅಂತ್ಯಸಂಸ್ಕಾರ ನಾಳೆ ಬೆಳಗ್ಗೆ 10.00 ಗಂಟೆಗೆ ( ಭಾನುವಾರ ) ಹುಟ್ಟೂರು ಮುಂಡಿಗೆಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ.ಇನ್ನು ಇವರ ಅಗಲಿಕೆಗೆ ಸ್ನೇಹಿತರು,ರಾಜಕೀಯ ಗಣ್ಯರು, ಬಂಧುಗಳು ಕಂಬನಿ ಮಿಡಿದಿದ್ದಾರೆ.

