ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು – ತನಿಖೆ ಚುರುಕುಗೊಳಿಸುವಂತೆ ಸ್ಥಳೀಯರ ಪಟ್ಟು

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ಮತ್ತೆ ಕಳ್ಳರ ಕಾಟ ಶುರುವಾಗಿದ್ದು,ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ ಕದ್ದೋಯ್ದಿದ್ದಾರೆ ಎಂದು ದೂರು ದಾಖಲಾಗಿದೆ.ಮೇಗರವಳ್ಳಿಯ ಸರ್ವೇ ನಂ 239 ರ ಅಶೋಕ್ ರವರಿಗೆ ಸೇರಿದ ತೋಟದಲ್ಲಿ ಅಡಕೆ ಕಳ್ಳತನವಾಗಿದ್ದು, ಸು 5 ಸಾವಿರ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿದ್ದಾರೆ. ಇನ್ನು ಅಶೋಕ್ ಅವರ ಮನೆಯಿಂದ ತೋಟಕ್ಕೆ ಸು 1.5 ಕಿಮೀ ದೂರವಿದ್ದು, ಕಳ್ಳತನ ನಡೆಯಲು ಕಾರಣವಾಗಿರಬುಹುದು ಎಂದೂ ಸಾರ್ವಜನಿಕರು ಊಹಿಸಿದ್ದು ಪೊಲೀಸ್ ಇಲಾಖೆ ಕೂಡಲೇ ತನಿಖೆ ಚುರುಕುಗೊಳಿಸುವಂತೆ ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *