- ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಶಿವಮೊಗ್ಗ : 21 ಗೋವುಗಳನ್ನ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತೀರ್ಥಹಳ್ಳಿಯ ಮಾಳೂರಿನ ಮನೆಯಿಂದರಲ್ಲಿ ಕೂಡಿ ಹಾಕಿದ್ದು, ಈ ಹಿನ್ನಲೆ ಖಚಿತ ಮಾಹಿತಿ ಪಡೆದು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ ನೇತೃತ್ವದಲ್ಲಿ ಆರೋಪಿ ಜಬಿವುಲ್ಲಾ ಮನೆಗೆ ಮೇಲೆ ದಾಳಿ ನಡೆಸಿ ಸು 21ಗೋವುಗಳನ್ನು ರಕ್ಷಣೆ ಮಾಡಿದ್ದು, ಆರೋಪಿ ತಪ್ಪಿಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಿದ್ದಾರೆ.ಇನ್ನು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತೀರ್ಥಹಳ್ಳಿ ಸುತ್ತಮುತ್ತಲಿನಲ್ಲಿ ಗೋ ಕಳ್ಳತನ ಹಾಗೂ ಮಾರಾಟ ಜಾಲಗಳು ಇತ್ತೀಚೆಗೆ ಹೆಚ್ಚಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

