• ತೀರ್ಥಹಳ್ಳಿ ಪೋಲೀಸರ ಮಿಂಚಿನ ಕಾರ್ಯಾಚರಣೆ

ದಿ.24-05-2024 ರಂದು ಬೆಳಗ್ಗೆ ಇಬ್ಬರು ಜನ ಓಮಿನಿ ಕಾರ್ ನಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಸೊಪ್ಪನ್ನು ಮಾರಾಟ ಮಾಡುವ ಸಲುವಾಗಿ ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,ಅನಿಲ್ ಕುಮಾರ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಎ. ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ, ಗಜಾನನ ವಾಮನ ಸುತಾರ ಡಿವೈಎಸ್ಪಿ ತೀರ್ಥಹಳ್ಳಿ ಉಪವಿಭಾಗ ರವರ ನೇತೃತ್ವದ ಅಶ್ವತ್ ಗೌಡ ಜೆ ಪಿ ಐ ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವನಗೌಡ ಪಿಎಸ್ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ದಾಳಿ ನಡೆಸಿ, *ಆರೋಪಿಗಳಾದ 1) ಮಹಮ್ಮದ್ ಬೇಗ್, 38 ವರ್ಷ, ಆಚಾಪುರ, ಆನಂದಪುರ, ಸಾಗರ ತಾ, ಮತ್ತು 2) ಗಜೇಂದ್ರ @ ಗಜ, 37 ವರ್ಷ, ಕೆಂಚನಾಳ, ಹೊಸನಗರ,* ಇವರನ್ನು ದಸ್ತಗಿರಿ ಮಾಡಿ ಸದರಿಯವರಿಂದ *ಅಂದಾಜು ಮೌಲ್ಯ 1,60,000/- ರೂ ಗಳ 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ* ಮತ್ತು *ಅಂದಾಜು ಮೌಲ್ಯ 2,50,000 ರೂ ಗಳ ಓಮಿನಿ ಕಾರನ್ನು* ವಶಕ್ಕೆ ಪಡೆದು, ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0127/2024 ಕಲಂ 20(b)(ii)(B) ಎನ್ ಡಿ ಪಿ ಎಸ್ ಖಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Leave a Reply

Your email address will not be published. Required fields are marked *