
ತೀರ್ಥಹಳ್ಳಿ : ತಾಲೂಕಿನ ನಾಲೂರು ಗ್ರಾಂ ಪಂ ವ್ಯಾಪ್ತಿಯ ತೆಮ್ಮೆ ಮನೆ – ಹುರುಳಿ ರಸ್ತೆ ಹೊಂಡ ಗುಂಡಿಯಿಂದ ತುಂಬಿದ್ದು ವಾಹನಗಳು ಕೆಟ್ಟು ನಿಂತು ಸವಾರರು ಪರದಾಡುವಂತಾಗಿದೆ.

ಈ ಬಗ್ಗೆ ಜನಪ್ರತಿನಿದಿಗಳು ಹಾಗೂ ಸಂಬಂಧ ಇಲಾಖೆಯ ಗಾಢ ನಿದ್ರಾವಸ್ತೆಯಲ್ಲಿದ್ದು ರಸ್ತೆ ದುರಸ್ತಿ ಬಗ್ಗೆ ಸೂಕ್ತ ಕ್ರಮ ಜರುಗಿಸುವುದು ಅಗತ್ಯವಾಗಿದೆ.

ಶಾಸಕರಾದ ಆರಗ ಜ್ಞಾನೇಂದ್ರರು ಈ ಬಗ್ಗೆ ಗಮನ ಹರಿಸಿ ಮಾಹಿತಿ ಪಡೆದು ರಸ್ತೆ ಅಭಿವುದ್ದಿ ಗಾಗಿ ಸಹಕರಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇಷ್ಟಾದ ಮೇಲೂ ಸ್ಪಂದಿಸದೆ ಇದ್ದಲ್ಲಿ ರಸ್ತೆಗೆ ಗಿಡ ನೆಟ್ಟು ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಗೆ ನೀಡಿದ್ದಾರೆ.
