
– 4 ಇಲಾಖೆಯಲ್ಲಿ ಅನಧಿಕೃತ ಸಿಬ್ಬಂದಿಗಳು – ತಹಶೀಲ್ದಾರರು ಗಮನ ಹರಿಸಲು ಸಾರ್ವಜನಿಕರ ಒತ್ತಾಯ

ತೀರ್ಥಹಳ್ಳಿ : ಪಟ್ಟಣದ ತಾಲೂಕು ಕಚೇರಿಯಲ್ಲಿ ಒಂದೆಡೆ ಭ್ರಷ್ಟ ಅಧಿಕಾರಿಗಳು ಸು 20 ವರ್ಷಗಳಿಂದ ಬೀಡು ಬಿಟ್ಟಿದ್ದು ತಾಲೂಕು ಕಛೇರಿ ಹೋಗಿ ಲಂಚಕೊರರ ಕಛೇರಿ ಎಂದೇ ಹೆಸರುವಾಸಿಯಾಗಿದೆ.ಸಣ್ಣ ಕಡತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಲಂಚ ನೀಡದೆ ಕೆಲಸ ಆಗಲಾರದು ಎಂದು ಬಡ ರೈತನೊಬ್ಬ ಸತ್ಯಶೋಧ ನ್ಯೂಸ್ ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ರೆಕಾರ್ಡ್ ರೂಮ್, ಮುಜರಾಯಿ, ಎಲ್ ಆರ್ ಎಫ್, ಬಗರ್ ಹುಕುಂ 53 ಮತ್ತು 57 ಶಾಖೆ ನಲ್ಲಿ ಅನಧಿಕೃತ ಸಿಬ್ಬಂದಿಗಳ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಅವರು ಯಾವುದೇ ಟೆಂಡರ್ ಅಥವಾ ಸರ್ಕಾರಿ ನೌಕರರಾಗಿರುವುದಿಲ್ಲ, ಇವರಿಗೆ ಯಾವುದೇ ಗುರುತು ಚೀಟಿ ಇಲ್ಲ, ಹಾಜರಾತಿ ಪುಸ್ತಕದಲ್ಲಿ ಇವರ ಹೆಸರಿಲ್ಲ ಜೊತೆಗೆ ಸಹಿ ಮಾಡುವುದಿಲ್ಲ ಎಂದು ಸಾರ್ವಜನಿಕರು ಸತ್ಯಶೋಧ ಮಾಧ್ಯಮಕ್ಕೆ ತಿಳಿಸಿದರು. ಈ ಬಗ್ಗೆ ತಹಶೀಲ್ದಾರ್ ರಂಜಿತ್ ಎಸ್ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಮನವಿ ಮಾಡಿದರು.ಇನ್ನು ತಾಲೂಕು ಕಚೇರಿಯಲ್ಲಿ ಅನಧಿಕೃತ ಸಿಬ್ಬಂದಿಗಳು ಕೆಲಸ ಮಾಡಬಹುದೇ? ಮಾಡಿದರು ಇವರಿಗೆ ಸಂಬಳ ಕೊಡೊ ಮಹಾನುಭಾವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
