
ಶಿಕ್ಷಣಾಧಿಕಾರಿಗಳೇ, ದೈಹಿಕ ಶಿಕ್ಷಕರೆ ದಯವಿಟ್ಟು ಗಮನಹರಿಸಿ – ಅಧಿಕಾರಿಗಳೇ ನಿಮ್ಮ ಬಗ್ಗೆ ಗೌರವವಿದೆ – ಪೋಷಕರು

ತೀರ್ಥಹಳ್ಳಿ : ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಹುಬ್ಬೆ ಮಳೆಗೆ ಜನ ಜೀವನ ಅಸ್ತವ್ಯಾಸ್ತವಾಗಿದೆ. ಕೃಷಿ ಚಟುವಟಿಕೆ ಕೂಡ ಅರ್ಧಕ್ಕೆ ನಿಂತು ರೈತ ಕೂಡ ಕಂಗಾಲಾಗಿದ್ದಾನೆ. ಅಲ್ಲಲ್ಲಿ ಮಳೆ ಹಾಗೂ ಗಾಳಿಯ ಪರಿಣಾಮ ಅನಾಹುತಗಳು ಸೃಷ್ಟಿಯಾಗಿವೆ. ಇಂತಹ ಸಮಯದಲ್ಲಿ ಪ್ರೌಢಶಾಲೆಯ ಕ್ರೀಡಾಕೂಟ ಆಯೋಜನೆ ಮಾಡಿದ್ದು ಎಷ್ಟು ಸರಿ? ಮಕ್ಕಳ ಹಿತದೃಷ್ಟಿ ಗಮನದಲಿಟ್ಟುಕೊಂಡು ಮಳೆ ಕೊಂಚ

ಕಡಿಮೆಯಾದ ನಂತರ ಆರಂಭಿಸುವುದು ಸೂಕ್ತ ಎಂಬುದು ತೀರ್ಥಹಳ್ಳಿ ಜನತೆಯ ಹಾಗೂ ಪೋಷಕರ ಮನವಿಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಧಿಕ ಮಳೆಯಾಗಿದೆ. ಕ್ರೀಡಾಕೂಟ ಆಯೋಜನೆ ಮಾಡಿದ್ದು ತಪ್ಪಲ್ಲ ಆದರೆ ಮಳೆಗಾಲದ ಈ ಸಮಯದಲ್ಲಿ ನೆಲ ಮೃದುವಾಗಿ ಜಾರುವ ಪ್ರಮೇಯವೇ ಹೆಚ್ಚು ಆದ್ದರಿಂದ

ಈ ವಿಷಯ ಕೊಂಚ ಗಂಭೀರವಾಗಿ ಯೋಚಿಸಿ ನಡೆಸುವುದು ಅತ್ಯಗತ್ಯ.ಈ ಸಂಬಂಧ ಸತ್ಯಶೋಧ ಮಾಧ್ಯಮಕ್ಕೆ ಪೋಷಕರು ಸು 50ಕ್ಕೂ ಹೆಚ್ಚು ಕರೆ ಮಾಡಿದ್ದು ಮಕ್ಕಳ ಬಗೆಗಿನ ಕಾಳಜಿಗಾಗಿ ಸತ್ಯಶೋಧ ಮಾಧ್ಯಮ ಈ ವರದಿ ಬಿತ್ತರಿಸಿದೆ.
