
ತೀರ್ಥಹಳ್ಳಿ : ತಾಲೂಕಿನ ಕಸಬಾ ಹೋಬಳಿ ಅಲಗೆರೆ ಅಂಗನವಾಡಿ ಕೇಂದ್ರದಲ್ಲಿ ಬಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಪುಟಾಣಿ ಮಕ್ಕಳು ಮತ್ತು ಅಂಗನವಾಡಿ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ ಅಡುಗೆ ಕೊಣೆಯಲ್ಲಿ ಭಾರಿ ಪ್ರಮಾಣದ ನೀರು ನಿಂತು ಅಪಾಯದ ಮುನ್ಸೂಚನೆ ಎದ್ದು ಕಾಣುತಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಮಾನ್ಯ ಶಾಸಕರು ತೀರ್ಥಹಳ್ಳಿ ತಹಸೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಕ್ಷಣ ಗಮನಹರಿಸಲು ಸಾವಜನಿಕರು ಮನವಿ ಮಾಡಿದ್ದಾರೆ.
