- ಸು 70ಕ್ಕೂ ಹೆಚ್ಚು ಜನರ ಸಾವು ಶಂಕೆ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಪೀಡಿತ ಪ್ರದೇಶವನ್ನು ಹತ್ತಿರದ ಪಟ್ಟಣಕ್ಕೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆಯೂ ನಾಶವಾಗಿದ್ದರಿಂದ ಭಾರತೀಯ ಸೇನೆಯನ್ನು ಸಂಪರ್ಕಿಸಲಾಯಿತು. ಸೇನೆಯು 122 ಇನ್ಫೆಂಟ್ರಿ ಬೆಟಾಲಿಯನ್ (ಪ್ರಾದೇಶಿಕ ಸೇನೆ) ಮತ್ತು ಕಣ್ಣೂರಿನ ಡಿಎಸ್ಸಿ ಕೇಂದ್ರದ ಎರಡು ತುಕಡಿಗಳು ಸೇರಿದಂತೆ ನಾಲ್ಕು ತುಕಡಿಗಳನ್ನು ಸಜ್ಜುಗೊಳಿಸಿದೆ.ವಯನಾಡ್ ಭೂಕುಸಿತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಪೊಲೀಸ್ ಡ್ರೋನ್‌ಗಳು ಮತ್ತು ಶ್ವಾನದಳವನ್ನು ನಿಯೋಜಿಸಲಾಗಿದೆ. ಭೂಕುಸಿತ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ ಆರ್ಮಿ ಇಂಜಿನಿಯರಿಂಗ್ ಗ್ರೂಪ್ ಅನ್ನು ತುರ್ತಾಗಿ ವಯನಾಡ್‌ಗೆ ನಿಯೋಜಿಸಲಾಗುವುದು. ಸೇತುವೆ ಕುಸಿತದ ನಂತರ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನಿಂದ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (ಎಂ ಇ ಜಿ ) ಆಗಮಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ (ಸಿಎಂ ಓ ) ಮಾಹಿತಿ ನೀಡಿದೆ.
ಕಿಮ್ಮನೆ ರತ್ನಾಕರ್ ಮುಡಿಗೆ ಮಲೇಷ್ಯಾ -ಇಂಡಿಯಾ ಇಂಟರ್ನಷನಲ್ ಐಕಾನಿಕ್ ಪ್ರಶಸ್ತಿ

ಪ್ರತಿಷ್ಠಿತ ಸುದ್ದಿ ವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ದಿನ ಪತ್ರಿಕೆ ಕನ್ನಡ ಪ್ರಭ ಸಂಸ್ಥೆ ಕೊಡಮಾಡಲಿರುವ 2023-25ನೇ ಸಾಲಿನ ಆಗಸ್ಟ್ 09 ರಂದು ನಾಡಿನ ಸಾಧಕರಿಗೆ ಪ್ರಶಸ್ತಿಮಲೇಷ್ಯಾ -ಇಂಡಿಯಾ ಇಂಟರ್ನಷನಲ್ ಐಕಾನಿಕ್ ಪ್ರಶಸ್ತಿ ಗೆ ತೀರ್ಥಹಳ್ಳಿಯ ಸರಳ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಭಾಜನಾರಾಗಿರಿವುದು ಹೆಮ್ಮೆಯ ವಿಷಯವಾಗಿದ್ದು ಸುದ್ದಿ ತಿಳಿದ ಕಿಮ್ಮನೆ ಅಭಿಮಾನಿ ಬಳಗ ಹಾಗೂ ಆಪ್ತ ವಲಯ ಸಂಭ್ರಮಿಸಿ ಶುಭ ಹಾರೈಸಿದ್ದಾರೆ.
ತೀರ್ಥಹಳ್ಳಿ : ಸಾಲೂರು ಗ್ರಾಂ ಪಂ ಕುನ್ನಿಕೇವಿ ಸೇತುವೆ ಅಸ್ತವ್ಯಾಸ್ತ

ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮ ಪಂಚಾಯತಿಯ ಕುನ್ನಿಕೇವಿ ಸೇತುವೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಹೊಂಡ ಗುಂಡಿಗಳೆಲ ಬಿದ್ದು ಜನ ಸಾಮಾನ್ಯರಲ್ಲಿ ಭಯ ಭೀತಿ ಉಂಟಾಗಿದೆ, ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು.
ಶಿರಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ಬಳಿ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿತು. ಇದೀಗ ಇಂದು ಮತ್ತೆ ಭಾರಿ ಬಭೂಕುಸಿತವಾಗಿದ್ದು ಟ್ಯಾಂಕರ್ ಸೇರಿ ಮಣ್ಣಿನ ಅಡಿ ಸುಮಾರು 6 ವಾಹನಗಳು ಸಿಲುಕಿರುವ ಘಟನೆ ನಡೆದಿದೆ.





