
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ನಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿ ಬೆಳಚಿ ಕಟ್ಟೆ ಬಳಿ ವಿದ್ಯುತ್ ಲೈನ್ ತುಂಡಾಗಿ ಮುಖ್ಯ ರಸ್ತೆಗೆ ಬಿದ್ದಿದ್ದು ಕೆಲ ಸಮಯ ವಾಹನಗಳು ನಿಂತಲ್ಲೇ ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು. ಊರಿನ ಪ್ರಮುಖರು, ಯುವಕರು ಟ್ರಾಫಿಕ್ ತಡೆಯಲು ತಂತಿ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

