- ಸಾಧಕರಿಗೆ ಯುಗಾದಿ ಐಸಿರಿ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ
- ಜೇನುಗೂಡಿನಲ್ಲಿ ಕವಿ ಮನಗಳ ಚಿಲಿಪಿಲಿ

ಧರ್ಮಸ್ಥಳ : ಮುಖಪುಟದ ಹೆಸರಾಂತ ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹ ಪರ್ವ ಕಾರ್ಯಕ್ರಮ ಅಕ್ಟೋಬರ್ 20ರ ಭಾನುವಾರದಂದು ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಮುಂಬೈ, ಪುಣೆಯಿಂದ ಕವಿಗಳು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಬಳಗದ ಮೂವರು ವ್ಯವಸ್ಥಾಪಕಿಯರ ಕೃತಿ ಬಿಡುಗಡೆ ನಡೆಯಿತು.ಕಾಸರಗೋಡಿನ ಸೌಮ್ಯ ಗುರು ಕಾರ್ಲೆಯವರ ಹೇಮಾಕ್ಷರಿ, ಬೆಂಗಳೂರಿನ ಶ್ರೀಲತಾ ಭಾರ್ಗವ್ ಅವರ ಸೇವಂತಿಗೆ ಹಾಗೂ ತುಮಕೂರಿನ ಮೀನಾ ನಾಗರಾಜ್ ಅವರ ಭಾವದಿಂಚರ ಕೃತಿಗಳು ಲೋಕಾರ್ಪಣೆಗೊಂಡವು.

ಇನ್ನು ಇದೆ ವೇಳೆ ಯುಗಾದಿ ಬಳಗದ ಸಕ್ರಿಯ ಬರಹಗಾರರು ಹಾಗೂ ಸಾಹಿತ್ಯದ ಸಾಧನೆ ಮಾಡಿದ ಸಾಧಕರಿಗೆ ಯುಗಾದಿ ಐಸಿರಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗಿನ ವೀಣಾ ಉಮೇಶ್ ಪ್ರಾರ್ಥನೆ ಹಾಡಿದರು. ಬೆಂಗಳೂರಿನ ಸುಜಾತಾ ಭಟ್ ಸ್ವಾಗತಿಸಿದರು,ಪ್ರಸ್ತಾವಿಕ ಭಾಷಣವನ್ನು ಹೊನ್ನಾವರದ ಶ್ರೀನಾಗ್ ಪಿ. ಎಸ್ ಮಾಡಿದರು,ಬೆಳ್ತಂಗಡಿಯ ಆಶಾ ಅಡೂರ್, ಶ್ರೀಲತಾ ಭಾರ್ಗವ್ ಹಾಗೂ ಬೆಂಗಳೂರಿನ ದರ್ಶಿನಿ ಪ್ರಸಾದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.ಮೀನಾ ನಾಗರಾಜ್ ವಂದಿಸಿದರು.ಕಾರ್ಯಕ್ರಮದ ನಿಮಿತ್ತ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಸ್ನೇಹಪರ್ವ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.




