



ಶಿವಮೊಗ್ಗ : ಪಾಕಿಸ್ತಾನ ಹೆಸರು ಬಳಸಿ ವಿಡಿಯೋ ಮಾಡಿ ಹರಿಬಿಟ್ಟು ಧರ್ಮ ಧರ್ಮದ ನಡುವೆ ದ್ವೇಷ ಬರುವಂತೆ ಪ್ರಚೋದನೆ ನೀಡಿದ ಭದ್ರಾವತಿಯ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಸೋಷಿಯಲ್ ಮೀಡಿಯಾ ಮಾನಿ ಟರಿಂಗ್ ಸೆಲ್ ಮೂಲಕ ಜಾಲತಾಣ ಗಳ ನಿಗಾ ಇಟ್ಟಿದ್ದ ವೇಳೆ ಪ್ರಚೋದನಕಾರಿ ವಿಡಿಯೋ

ಸಿಕ್ಕಿದ್ದು ಭದ್ರಾವತಿಯ ಸಾದತ್ ಕಾಲೊನಿ ನಿವಾಸಿ ಸೋಫಿಯಾನ್ ಹಾಗೂ ಆತನೊಂದಿಗೆ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಹಳೆ ನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
