Oplus_131072

ಜಾತ್ರೆಯಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಿದ್ದು ಎಲ್ಲಾ ಸಾರ್ವಜನಿಕರು ಸಭ್ಯತೆಯಿಂದ ನಡೆದುಕೊಳ್ಳುವುದು

ಜಾತ್ರೆಯಲ್ಲಿ ಪುಂಡಾಟಿಕೆ ಮತ್ತು ಇತರೆ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸತಕ್ಕದ್ದಲ್ಲ. ಅಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆ 112/ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ.

ತುಂಗಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು,ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದಲ್ಲದೆ ಅನಗತ್ಯವಾಗಿ ನದಿಗೆ ಇಳಿಯುವುದು/ ಈಜಾಡುವುದು ಮಾಡತಕ್ಕದ್ದಲ್ಲ

ಜಾತ್ರೆಯಲ್ಲಿ ಜೇಬು ಕಳ್ಳರು ಮತ್ತು ಸರಗಳ್ಳರಿದ್ದು,ಧರಿಸುವ ಆಭರಣಗಳನ್ನು ಸಾರ್ವಜನಿಕರು ಪ್ರದರ್ಶಿಸದೆ ಎಚ್ಚರಿಕೆ ವಹಿಸಿ

ಜಾತ್ರೆಯಲ್ಲಿ ಮಹಿಳೆಯರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳುವುದು ನೂಕು ನುಗ್ಗಲು ಮಾಡತಕ್ಕದ್ದಲ್ಲ.

ರಥ ಬೀದಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು. ದೇವಸ್ಥಾನಕ್ಕೆ ಸಂಬಂಧಿಸಿದ ವಾಹನಗಳಿಗೆ ಪಾಸ್ ವಿತರಿಸಲಾಗಿದ್ದು ಪಾಸ್ ಹೊಂದಿರುವ ವಾಹನಗಳು ಮಾತ್ರ ರಥ ಬೀದಿಯಲ್ಲಿ ಸಂಚರಿಸುವುದು ರಥ ಬೀದಿಯಲ್ಲಿ ಮನೆಗಳನ್ನು ಹೊಂದಿರುವ ಸಾರ್ವಜನಿಕರು ಛತ್ರಕೇರಿ ರಸ್ತೆ ಸಂಚಾರಿಸುವುದು.

ಜಾತ್ರೆ ಮತ್ತು ಎಳ್ಳಮಾವಾಸ್ಯೆಯ ಪ್ರಯುಕ್ತ ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ಹೆಚ್ಚಾಗಿರುವುದರಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆಗೊಳಿಸುವುದು ವಾಹನ ನಿಲುಗಡೆಯನ್ನು ನಿಷೇಧಿಸುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಗೊಳಿಸಿದರೆ ಕಾನೂನು ರೀತ್ಯಾ ಕೈಗೊಳ್ಳಲಾಗುವುದು ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸತಕ್ಕದ್ದಲ್ಲ ಅಪ್ರಾಪ್ತರು ವಾಹನಗಳನ್ನು ಚಲಾಯಿಸತಕ್ಕದ್ದಲ್ಲ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದುಹೊಸ ವರ್ಷದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆ ಹಮ್ಮಿಕೊಂಡಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ರೆಸಾರ್ಟ್ /ಹೋಂ ಸ್ಟೇ ಮಾಲೀಕರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲಿ ಮುಂಚಿತವಾಗಿ ಪೊಲೀಸ್ ಅನುಮತಿಯನ್ನು ಪಡೆದುಕೊಳ್ಳುವುದಲ್ಲದೆ ದ್ವನಿವರ್ಧಕಗಳನ್ನು ಬಳಸುವ ಬಗ್ಗೆ ಪರವಾನಿಗೆಯನ್ನು ಪಡೆದುಕೊಳ್ಳುವುದು ಧ್ವನಿವರ್ಧಕ ಪರವಾನಿಗೆ ಮಾರ್ಗಸೂಚಿಯನ್ನು ಮತ್ತು ಮಾನ್ಯ ಪೋಲಿಸ್ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಯವರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳುವುದು ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.

Oplus_131072

ಮಧ್ಯದ ಅಂಗಡಿ ಮಾಲೀಕರು ಅಬಕಾರಿ ಇಲಾಖೆಯವರು ನೀಡಲಾದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿದೆದಿನಾಂಕ 31.12.2024 ರಂದು ನಡೆಯುವ ಶ್ರೀರಾಮೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ತೆರೆದಿರುವ ವ್ಯಾಪಾರಸ್ಥರು ರಥಕ್ಕೆ ಅಡ್ಡಿಯಾಗದಂತೆ ತಮ್ಮ ವಸ್ತುಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಹಕರಿಸಲು ಸೂಚಿಸಿದೆ

ಜಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ನೀಡಲಾದ ಸೂಚನೆಗಳನ್ನು ಮಾರ್ಗಸೂಚಿಗಳನ್ನು ಪಾಲನೆ ಮಾಡುವುದರ ಮೂಲಕ ಜಾತ್ರೆಯನ್ನು ಯಶಸ್ವಿಗೊಳಲು ಸಹಕರಿಸಲು ಕೋರಿದೆ.

Leave a Reply

Your email address will not be published. Required fields are marked *