

ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದೆ. ಈ ವೇಳೆ ಅಭಿವೃದ್ಧಿ ಮಾಡಲು ಏನೆಲ್ಲಾ ಮಾಡಬೇಕೋ ಅದನ್ನು ನಾನು ಮಾಡಿದ್ದೇನೆ. ಅವಿಶ್ವಾಸ ಮಾಡಿದ ನಂತರ ಸಹ ಕೋಟಿಗಟ್ಟಲೆ ಹಣ ಟೆಂಡರ್ ಮಾಡಿದ್ದೇನೆ. ಇಷ್ಟೊಂದು ಕೆಲಸ ಮಾಡಿದ ನಂತರವು ಅವಿಶ್ವಾಸ ಮಾಡುವ ಅಪರಾಧ ನಾನೇನು ಮಾಡಿದ್ದೇನೆ ಎಂಬುದು ತಿಳಿದಿಲ್ಲ ಪಟ್ಟಣ ಪಂಚಾಯತ್ ಆರ್ಥಿಕತೆ ಹೆಚ್ಚಿಸುವ ಎಲ್ಲಾ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಧಿಕಾರ ಕೊಡುವ ಜೊತೆಗೆ ಮರ್ಯಾದೆ ತೆಗೆಯುವ ಕೆಲಸ ಕೂಡ ಮಾಡಿದೆಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಬೇಸರ ವ್ಯಕ್ತಪಡಿಸಿದರು

ಗುರುವಾರ ಪಟ್ಟಣ ಪಂಚಾಯತ್ ನ ಡಾ. ಟಿ ನಾರಾಯಣ ಸ್ವಾಮಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಇತ್ತೀಚಿಗೆ ಕೆಲವು ಗೊಂದಲಗಳು ಸೃಷ್ಟಿ ಆಗಿದೆ. ಅದನ್ನು ಸರಿಪಡಿಸದೆ ಹೋದರೆ ಎಲ್ಲರಿಗೂ ತಿಳಿಯುವುದಿಲ್ಲ. ಈಗಾಗಲೇ ಅ. 18 ರಂದು ಅವಿಶ್ವಾಸ ನಿರ್ಣಯ ಮಾಡಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ಮೂರು ಅಧ್ಯಕ್ಷರು ಬದಲಾವಣೆ ಎಂಬುದಾಗಿ ತಿಳಿಸಿದ್ದರು. ಎರಡು ಬಾರಿ ಈ ರೀತಿ ಆಗಿದೆ. ಮೊದಲ ಸಂದರ್ಭದಲ್ಲಿ ಶಬನಮ್, ಸುಶೀಲ ಶೆಟ್ಟಿ, ಗೀತಾ ರಮೇಶ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಆ ನಂತರದ ಎರಡೂವರೆ ವರ್ಷದಲ್ಲಿ ನನಗೆ ಮೊದಲು ಅಧ್ಯಕ್ಷನಾಗಲು ತಿಳಿಸಿದ್ದರು. ಅಕ್ಟೋಬರ್ 31ರಂದು ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ ಎಂದರು. ಆಗಸ್ಟ್ 28 ಕ್ಕೆ ಕಿಮ್ಮನೆ ರತ್ನಾಕರ್ ಅವರು ಕೆಲವು ಕಾರ್ಯಕ್ರಮಗಳ ಉದ್ಘಾಟನೆ ಮಾಡಲು ಹೇಳಿ ಆಗಸ್ಟ್ 30 ಕ್ಕೆ ಆವಿಶ್ವಾಸ ನಿರ್ಣಯ ಮಾಡಿಸಿದ್ದಾರೆ. ವಾಲಿಬಾಲ್ ಕೋರ್ಟ್, ಕುರುವಳ್ಳಿ ಆಟೋ ನಿಲ್ದಾಣ, ತುಂಗಾ ನದಿಯ ತೀರದಲ್ಲಿ ಲೈಟಿಂಗ್ ಅಳವಡಿಕೆ, ಸಿಸಿಟಿವಿ ಅಳವಡಿಕೆ, ಬನ್ನಿ ಮಂಟಪ ನವೀಕರಣ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಕೆಲವು ಉದ್ಘಾಟನೆ ಮಾಡಿದ್ದೇವೆ

ಸೆ. 15 ಕ್ಕೆ ಅವಿಶ್ವಾಸ ಸಭೆ ಕರೆಯಬೇಕಿತ್ತು. ಆದರೆ ಸೆ. 16 ಕ್ಕೆ ರಾಜೀನಾಮೆ ಕೊಟ್ಟಿದ್ದೆ. ರಾಜೀನಾಮೆ ಅಂಗಿಕಾರ ಆಗಲು 10 ದಿನ ಸಮಯ ಬೇಕಿತ್ತು. ಆ ವೇಳೆ ಕೆಲವು ಕಾರ್ಯಕ್ರಮದ ಉದ್ಘಾಟನೆ ಮಾಡಲು ನಮ್ಮೆಲ್ಲಾ ಸದಸ್ಯರಿಗೆ ಅಹ್ವಾನ ನೀಡಿದ್ದರು ಯಾರು ಬಂದಿಲ್ಲ. ವಿರೋಧ ಪಕ್ಷದ ಸಹಕಾರದಿಂದ ಕೆಲವು ಉದ್ಘಾಟನೆ ಮಾಡಿದ್ದೇವೆ. ರಾಜೀನಾಮೆ ನೀಡಿದ ನಂತರ ಸಹ ಮತ್ತೊಮ್ಮೆ ಸೆ. 23ಕ್ಕೆ ಅವಿಶ್ವಾಸ ಮಾಡಲು ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ನಾನು ಯಾರಿಗೂ ಮೋಸ ಮಾಡಿಲ್ಲ ಎಂದರು.ಉಪಾಧ್ಯಕ್ಷರ ವಿಚಾರದಲ್ಲೂ ಸಮಯ ಮೀರಿ ಆಡಳಿತ ಮುಂದುವರೆಸಿದಾಗ, ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿಯಲ್ಲೂ ರಾಜೀನಾಮೆ ನೀಡದೆ ಕೆಲಸ ಮಾಡಿದಾಗ ಅವರ ವಿರುದ್ಧ ಅವಿಶ್ವಾಸ ಮಾಡಿಲ್ಲ. ನನಗೆ ಯಾಕೆ ಈ ರೀತಿ ತೊಂದರೆ ಮಾಡಿದ್ದು. ನಾನು ಯಾವತ್ತು ಕಾಂಗ್ರೆಸ್ ಪಕ್ಷದ ಪರವೇ.. ನಮಗೆ ವಿಪ್ ಜಾರಿ ಮಾಡಲಿ ಬಿಡಲಿ ಪಕ್ಷವನ್ನು ಬಿಡಲ್ಲ.

ಬಿಜೆಪಿ ಅವರ ಜೊತೆಗೆ ಮಾತನಾಡಿದರೆ, ಅವರನ್ನು ಕಾರ್ಯಕ್ರಮ ಕರೆದರೆ ನಾವು ಬಿಜೆಪಿ ಎಂದು ಬಿಂಬಿಸುತ್ತಾರೆ. ಓರ್ವ ಸಂಸದರು ನಮ್ಮನ್ನು ಕರೆದಾಗ ನಾನು ಹೋಗಿದ್ದೇನೆ. ವೈದ್ಯರ ವರ್ಗಾವಣೆ ವಿಚಾರದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷನಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ.ಅದನ್ನೆಲ್ಲ ತಪ್ಪು ಎಂದರೆ ಹೇಗೆ? ಎಂದು ಪ್ರೆಶ್ನೆ ಮಾಡಿದರು.ನಾನು ಧರ್ಮ, ಜಾತಿ, ರಾಜಕೀಯ ಮೀರಿ ಕೆಲಸ ಮಾಡಿದ್ದೇನೆ. ಇಡೀ ದೇಶದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾತನಾಡಿದರೆ ಇಲ್ಲಿ ಮಾತ್ರ ಉಲ್ಟಾ ಆಗಿದೆ. ಅವಿಶ್ವಾಸ ಸಭೆನಡೆಯುವ ಸಂದರ್ಭದಲ್ಲಿ ಏನಾದರು ಅವಿಶ್ವಾಸ ಆಗದೇ ಹೋದರೆ ಅವಮಾನ ಯಾರಿಗೆ? ಎಂದು ಪ್ರೆಶ್ನೆ ಮಾಡಿದರು. ಬಜೆಟ್ ನಿಂದ ಬಜೆಟ್ ಒಳಗೆ ಆಗುವ ಕಾರ್ಯವನ್ನು ಮಾತ್ರ ಕೆಲಸ ಎನ್ನುತ್ತಾರೆ.. ಯಾರೋ ಮಾಡಿದ ಕೆಲಸಕ್ಕೆ ತಮ್ಮ ಹೆಸರು ಹಾಕಿಕೊಳ್ಳುವುದು ಅಲ್ಲ ಎಂದರು.ಈ ವೇಳೆ ಸದಸ್ಯರಾದ ಸುಶೀಲಾ ಶೆಟ್ಟಿ ಹಾಗೂ ನಮ್ರತ್ ಇದ್ದರು.

