Oplus_131072

ತೀರ್ಥಹಳ್ಳಿ : ಬಿಳಿ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿಯ ಬೆಟ್ಟಮಕ್ಕಿ ಸಹ್ಯಾದ್ರಿ ( ಐ. ಸಿ. ಎಸ್. ಸಿ ) ಶಾಲೆಯ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿದ್ದಾರೆ.ಐಸಿರಿ (14 ವರ್ಷ ) ಮೃತಪಟ್ಟ ದುರ್ಧೈವಿ.

ಹೆಗ್ಗೋಡಿನ ಐಸಿರಿ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೆಲವು ದಿನಗಳಿಂದ ಬಿಳಿ ಜಾಂಡಿಸ್ ಕಾಯಿಲಿಯಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಕಿಡ್ನಿ ವೈಫಲ್ಯ ಸಹ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇವರ ಅಕಾಲಿಕ ನಿಧನಕ್ಕೆ ಸಹ್ಯಾದ್ರಿ ಶಾಲಾ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

Oplus_131072

Leave a Reply

Your email address will not be published. Required fields are marked *