

ತಾಲೂಕಿನ ಆಗುಂಬೆ ಹೋಬಳಿ ಬಾಳೆಹಳ್ಳಿ ಗ್ರಾಮ ಹೊಸಕೇರಿಯ ಲೋಕಪ್ಪ ಗೌಡ ಎಂಬುವರ ಗದ್ದೆಗೆ ಕಾಡು ಕೋಣಗಳು ನುಗ್ಗಿ ಬತ್ತದ ಪಸಲು ಹಾಳು ಮಾಡಿದ್ದು ರೈತನಿಗೆ ಬಾರಿ ನಷ್ಟವಾಗಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸದ್ಯ ಕಾಡು ಪ್ರಾಣಿಗಳ ಲೂಟಿ ಅತಿರೇಕವಾಗಿದ್ದು ರೈತರ ಪರಿಸ್ಥಿತಿ ಹೇಳತೀರದಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಪರಿಹಾರ ನೀಡಲು ಗ್ರಾಮಸ್ಥರು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನೊಂದ ರೈತರು ಮನವಿ ಮಾಡಿದ್ದಾರೆ.

