

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಸಮೀಪದಲ್ಲಿ ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರ ನಿರ್ಲಕ್ಷ್ಯ ದಿಂದಾಗಿ 8 ಗಂಟೆ ಸುಮಾರಿಗೆ ಅಗಸರಕೋಣೆಯಾ ಬೆತ್ತ ಪ್ಲಾಂಟೇಷನ್ ಪಕ್ಕದಲ್ಲಿ ಒಣಗಿ ನಿಂತಿದ್ದ ಧೂಪದ ಮರವು 11kv ಲೈನ್ ಮೇಲೆ ಬಿದ್ದ ಹಿನ್ನಲೆ ಬೃಂದಾವನ ಹೋಟೆಲ್ ಪಕ್ಕದ ವಿದ್ಯುತ್ ಕಂಬ ರಸ್ತೆ ಯಲ್ಲಿ ಸಾಗುತ್ತಿದ್ದ ಬೈಕ್ ಸವಾರರಿಬ್ಬರ ಮೇಲೆ ಬಿದ್ದು ತೀವ್ರ ವಾಗಿ ಗಾಯಗೊಂಡಿದ್ದ ಇಬ್ಬರಲ್ಲಿ ಒಬ್ಬರಾದ ರಂಜಿತ್ (23) ಮಣಿಪಾಲ ತಲುವುವ ಮೊದಲೇ ಕೊನೆಯುಸಿರೆಳೆದರು.

ಇನ್ನೊಬ್ಬ ಕಲಾವಿದ ವಿನೋದ್ ರಾಜ್ ಪ್ರಾಣಪಯದಿಂದ ಪಾರಾಗಿದ್ದು ಈ ರಸ್ತೆಯಲ್ಲಿರುವ ಸಾಕಷ್ಟು ಒಣ ಮರ ತೆರವುಗೊಳಿಸಲು ಈಗಾಗಲೆ ವೈಯಕ್ತಿಕವಾಗಿ ಹಲವಾರು ಬಾರಿ ಇಲಾಖೆಯವರ ಗಮನಕ್ಕೆ ತಂದಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಬೇಸರದ ವಿಚಾರ. ಈಗ ಅಮಾಯಕರೊಬ್ಬರ ಸಾವಿನ ಹೊಣೆ ಹೊರುವವರು ಯಾರು? ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.


