
ತೀರ್ಥಹಳ್ಳಿ ಯ ಭರವಸೆಯ ಕವಿ ಅಸ್ತಂಗತ- ಭಾವಪೂರ್ಣ ಶ್ರದ್ದಾಂಜಲಿ

ತೀರ್ಥಹಳ್ಳಿ :ತಾಲೂಕಿನ ಯುವಕವಿ ನಂಕು ಎಂದೇ ಪ್ರಸಿದ್ದಿ ಪಡೆದ ನಂದನ್ ಕುಪ್ಪಳ್ಳಿ 32 ಗುರುವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಇತ್ತೀಚಿಗೆ ಎಂ ಎನ್ ಡಿ ಖಾಯಿಲೆಗೆ ತುತ್ತಾಗಿ ದೈಹಿಕವಾಗಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು ಆದರು ಛಲ ಬಿಡದೆ ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದು ಇವರ ಬರವಣಿಗೆಯ ನೆನಪಿನ ಹೊತ್ತಿಗೆಯಾದ ಭಾವರೇಖೆ ಎಂಬ ಕವನ ಸಂಕಲನ ಹೊರ ತಂದಿದ್ದರು.

ಇನ್ನು ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಶಾಲೆಗಳಲ್ಲಿ ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಮೂಡಿಗೆರೆಯ ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾಗಿ ಪರಿಸರ ಜಾಗೃತಿ ಹಾಗೂ ಸಾಹಿತ್ಯಭಿಯಾನದಂತಹ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದ್ದರು.

ಇನ್ನು ಯುವ ಕವಿ ನಂದನ್ ನಿಧನರಾಗಿದ್ದ ಹಿನ್ನಲೆ ತೀರ್ಥಹಳ್ಳಿ ಜನತೆ ಕಂಬನಿ ಮಿಡಿದಿದೆ. ಇನ್ನು ಇವರ ಅಂತ್ಯಕ್ರಿಯೆಯನ್ನು ಅವರ ಸ್ವಗೃಹ ಕುಪ್ಪಳ್ಳಿ ಸಮೀಪ ನಡೆಯಲಿದೆ ಎಂದೂ ಮೂಲಗಳು ತಿಳಿಸಿವೆ.



