ತೀರ್ಥಹಳ್ಳಿ: ತಾಲೂಕಿನ ಕಟ್ಟೆಹಕ್ಕಲು ಸಸಿತೋಟ ಊರಿನ 28 ವರ್ಷದ ಕಿಶೋರ 7 -8 ದಿನಗಳಿಂದ ತೀವ್ರ ಜ್ವರದಿಂದ ಬಳಲುತಿದ್ದನು. ಚಿಕೆತ್ಸೆಗಾಗಿ ತಾಲೂಕು ಹಾಸ್ಪಿಟಲ್ ಗೆ ಹೋಗಿದ್ದರು ಅಲ್ಲಿ ತಕ್ಷಣ ರಕ್ತ ಪರೀಕ್ಷೆ ಮಾಡಿದ್ದು ಅದರಲ್ಲಿ ಕೆ.ಎಫ್.ಡಿ ಪಾಸಿಟಿವ್ ಎಂದು ತಿಳಿದಿದ್ದು ಅಲ್ಲಿಯೇ 4 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದನು. ಆದರೂ ಅಲ್ಲಿ ಸರಿಯಾದ ಚಿಕೆತ್ಸೆ ದೊರೆಯುತ್ತಿಲ್ಲವೆಂದು ಕಂಡು ತಾವಾಗಿಯೇ ಮಣಿಪಾಲಿನ ಕಸ್ತೂರ್ ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಇಂದು ಬೆಳಿಗ್ಗೆ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನೊಪ್ಪಿದ್ದಾನೆ.ಇಲ್ಲಿ ನಮಗೆ ಮೇಲ್ನೋಟಕ್ಕೆ ತಾಲೂಕು ಆಡಳಿತವೇ ನೇರ ಹೊಣೆ!! ಏಕೆಂದರೆ ಮಂಗನ ಕಾಯಿಲೆ (ಕೆ ಎಫ್ ಡಿ ) ಈ ರೋಗವು ಹೆಚ್ಚಾಗಿ ಮಲೆನಾಡಿನ ತೀರ್ಥಹಳ್ಳಿಯಲ್ಲಿಯ ಭಾಗದಲ್ಲಿ ಹೆಚ್ಚಾಗಿ ಕಂಡುಬರುವುದು ಎಂದು ಎಲ್ಲರಿಗೂ ತಿಳಿದಿದ್ದು. ಆದರೂ ಕೂಡ ಅರೋಗ್ಯ ಇಲಾಖೆ ಯಾವುದೇ ರೀತಿಯ ಮುಂಜಾಗ್ರತೆ ಕ್ರಮವಹಿಸುತ್ತಿಲ್ಲ.

ಈ ಯುವಕನಿಗೆ ಕೆ ಎಫ್ ಡಿ ಪಾಸಿಟಿವ್ ಇದೆ ಎಂದು 8 ದಿನಗಳ ಹಿಂದೆಯೇ ಅರೋಗ್ಯ ಇಲಾಖೆಗೆ ತಿಳಿದಿದ್ದು. ಯಾವುದೇ ರೀತಿಯ ಚಿಕಿತ್ಸೆ ಅವನಿಗೆ ಸರಿಯಾಗಿ ದೊರೆತಿಲ್ಲ… ಸರಿಯಾಗಿ ಚಿಕಿತ್ಸೆ ದೊರಕಿದ್ದರೆ ಇಂದು ನಾವು ಅವನನ್ನು ಕಳೆದುಕೊಳ್ಳುತ್ತಾ ಇರಲಿಲ್ಲವೇನೋ… ಹಾಗೂ ತಾಲ್ಲೂಕು ಅರೋಗ್ಯ ಇಲಾಖೆ ಸಂಪೂರ್ಣವಾಗಿ ಆಶಾ ಕಾರ್ಯಕರ್ತೆಯರ ಮೇಲೆ ಅವಲಂಭಿತ ವಾಗಿದೆ. ಮೇಲಾಧಿಕಾರಿಗಳು ಕೆಳವರ್ಗದ ಸಿಬ್ಬಂದಿಗಳಿಗೆ ಸೂಚನೆ ನೀಡುವುದು ಹೊರತು ಅರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಾಗಿ ನಿಗಾ ವಾಹಿಸದೆ ಇರುವುದೇ ಇವರ ವೈಫಲ್ಯ ಹಾಗೂ ಕೆಳವರ್ಗದ ಸಿಬ್ಬಂದಿಗಳ ರೀತಿಯಲ್ಲಿ ಅಧಿಕಾರಿಗಳು ಸ್ವತಃ ಫೀಲ್ಡ್ ಗೆ ಇಳಿಯಬೇಕು ಅದನ್ನು ಕೂಡ ಮಾಡದ ಪರಿಸ್ಥಿತಿಯಾಗಿದೆ.ಇಂದು ಬಲಿಯಾದ ಯುವಕನ ಚಿಕೆತ್ಸೆಗೆ ಅರೋಗ್ಯ ಇಲಾಖೆ ನೇರವಾಗದೆ ಇರುವುದೇ ಅವನ ಸಾವಿಗೆ ಕಾರಣ ಎಂದು ಇದರಲ್ಲಿಯೇ ತಿಳಿಯುತ್ತದೆ. ಅವರ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಇನ್ನಾದರೂ ತಾಲ್ಲೂಕು ಆಡಳಿತ ಮಂಗನ ಕಾಯಿಲೆಯ ಕುರಿತು ಎಲ್ಲಾ ಗ್ರಾಮದಲ್ಲೂ ಕೆ ಎಫ್ ಡಿ ಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನ ಕೈಗೊಳ್ಳಬೇಕು. ಎಂದು ಹಾಗೂ ಕೆ ಎಫ್ ಡಿ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ಶೇಡ್ಗಾರ್ ಗ್ರಾಮ ಪಂಚಾಯತ್ ಸದಸ್ಯ ಪಣಿರಾಜ್ ಬಂಕೇರಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

(ಸೂಚನೆ :ಮೇಲಿನ ಉಲ್ಲೇಖವು ಪಾಣಿರಾಜ್ ಅವರ ಹೇಳಿಕೆಯನ್ನು ಯಥಾಒತ್ತಾಗಿ ಪ್ರಕಟಿಸಲಾಗಿದೆ. )

Leave a Reply

Your email address will not be published. Required fields are marked *