- ಮಳೆಗಾಲದ ವೇಳೆ ದುರಂತಗಳು ಹೆಚ್ಚಳ – ಎಚ್ಚರ ಅಗತ್ಯ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಯಡೂರು ಸಮೀಪದ ಅಬ್ಬೆ ಫಾಲ್ಸ್ ನೋಡಲು ಬಂದಿದ್ದ 12 ಜನ ಪ್ರವಾಸಿಗರಲ್ಲಿ ಒಬ್ಬ ಪ್ರವಾಸಿಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಭಾನುವಾರ ಮಧ್ಯಾನ ನಡೆದಿದೆ.ಬೆಂಗಳೂರಿನಿಂದ ಅಬ್ಬೆ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗ ವಿನೋದ್ ಕುಮಾರ್ (26) ಮೃತ ವ್ಯಕ್ತಿಯಾಗಿದ್ದಾನೆ.

ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಮೂಲತಃ ಬಳ್ಳಾರಿಯವನಾಗಿದ್ದಾನೆ.ಅಕಸ್ಮಾತಾಗಿ ಕಾಲು ಜಾರಿ ಬಿದ್ದ ವಿನೋದ್ನನ್ನು ರಕ್ಷಿಸಲು ಸ್ನೇಹಿತರು ಹೆದರಿದ್ದು ಕೂಡಲೇ ನಗರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದು,ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪಿಎಸ್ಐ ರಮೇಶ್ ಮೃತ ವಿನೋದ್ ಅವರ ದೇಹಕ್ಕಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


